ದರ್ಪಣ ೧ - ಬಿರಿದ ಕನಸು
ಕನಸುಗಳು ನೂರಾರು
ಎದೆಯಲ್ಲಿ ಮುಚ್ಚಿಟ್ಟಂತೆ
ಕಣ್ಣು ತೆರೆದಾಗ ಎದೆಯೇ
ಬಿಚ್ಚಿ ಬಿರಿಯುತಿದೆ
ಎದೆಯಲ್ಲಿ ಮುಚ್ಚಿಟ್ಟಂತೆ
ಕಣ್ಣು ತೆರೆದಾಗ ಎದೆಯೇ
ಬಿಚ್ಚಿ ಬಿರಿಯುತಿದೆ
ದರ್ಪಣ ೨ - ಮುನಿಸು
ಬಾರೆ ಓ ಎನ್ನ ಕೋಮಲೆ
ಯಾಕೆ ಹೀಗೆ ದುರುಗುಡುತಿ
ಮುನಿಸು ತರವಲ್ಲ ಬಾಲೆ
ಎಂದಿದರ ಕೊನೆ ಮಾಡುತಿ?
ಬಾರೆ ಓ ಎನ್ನ ಕೋಮಲೆ
ಯಾಕೆ ಹೀಗೆ ದುರುಗುಡುತಿ
ಮುನಿಸು ತರವಲ್ಲ ಬಾಲೆ
ಎಂದಿದರ ಕೊನೆ ಮಾಡುತಿ?
ದರ್ಪಣ ೩ - ಶೂನ್ಯ
ಹೇಳುತ್ತಿದ್ದೆ ಅಂದು
ಪ್ರಪಂಚವೇ ಶೂನ್ಯ
ಯಾಕೆ ಗೊತ್ತಾ?
ನನ್ನ ಅಂಕಪಟ್ಟಿಯಲ್ಲಿ
ಪ್ರತೀಬಾರಿ
ಅದನ್ನೇ ಕಾಣುತ್ತಿದ್ದೆ!!!
ಹೇಳುತ್ತಿದ್ದೆ ಅಂದು
ಪ್ರಪಂಚವೇ ಶೂನ್ಯ
ಯಾಕೆ ಗೊತ್ತಾ?
ನನ್ನ ಅಂಕಪಟ್ಟಿಯಲ್ಲಿ
ಪ್ರತೀಬಾರಿ
ಅದನ್ನೇ ಕಾಣುತ್ತಿದ್ದೆ!!!
ದರ್ಪಣ ೪ - ನೆನಪು
ಬೇಸರದ ಕಟ್ಟೆ ಒಡೆದು
ನೇಸರನೂ ಮರೆಯಾದಾಗ
ಆಸರೆಯಿಲ್ಲದ ಭಾವಕೆ
ಉಸಿರುಗಟ್ಟಿದ ಬದುಕು;
ಮೆಲುಕು ಹಾಕಿದಷ್ಟೂ
ಸಾವಿನ ನೆನಪು.
ಬೇಸರದ ಕಟ್ಟೆ ಒಡೆದು
ನೇಸರನೂ ಮರೆಯಾದಾಗ
ಆಸರೆಯಿಲ್ಲದ ಭಾವಕೆ
ಉಸಿರುಗಟ್ಟಿದ ಬದುಕು;
ಮೆಲುಕು ಹಾಕಿದಷ್ಟೂ
ಸಾವಿನ ನೆನಪು.
ದರ್ಪಣ ೫ - ಜೀವನ
ಮುಚ್ಚಿಟ್ಟ ಸತ್ಯ
ಅಸತ್ಯಗಳ ಬೇಲಿಯನ್ನು
ಹಾರಿ ಬರುವ ಹಕ್ಕಿಯೊಂದು
ಮೈಮುದುಡಿ ಹೇಳಿತು-
ನನಗೆ ಕರುಣೆಯಿದೆ
ಆದರೆ ತೋರಲಾರೆ;
ಇದು ಪ್ರಸ್ತುತ ಜೀವನ.
ಮುಚ್ಚಿಟ್ಟ ಸತ್ಯ
ಅಸತ್ಯಗಳ ಬೇಲಿಯನ್ನು
ಹಾರಿ ಬರುವ ಹಕ್ಕಿಯೊಂದು
ಮೈಮುದುಡಿ ಹೇಳಿತು-
ನನಗೆ ಕರುಣೆಯಿದೆ
ಆದರೆ ತೋರಲಾರೆ;
ಇದು ಪ್ರಸ್ತುತ ಜೀವನ.
-ಶ್ರೀಸುತ
Photo Credit: marksandspencer
ಒಳ್ಳೆಯ ಪ್ರಯತ್ನ. ಶುಭವಾಗಲಿ.
ReplyDeleteಧನ್ಯವಾದಗಳು ರಾಮಚಂದ್ರ ಹೆಗಡೆಯವರೇ... ನಿಮ್ಮ ಸಹಕಾರ ಅತ್ಯಮೂಲ್ಯ...
Delete😊
Delete😊
Delete