೧. ವಿಶ್ವಕೋಶ
ಕಾರಂತರು ಚಲಿಸುವ ವಿಶ್ವಕೋಶ
ಕಾಲಿಗೆ ಚಕ್ರವಿದ್ದಂತೆ ಸುತ್ತಿದರು ದೇಶ ವಿದೇಶ
ಅವರಿಳಿಹರೆಯದಲಿ ಕಾಣುತ್ತಿದ್ದರು ಸಿಂಹದಂತೆ
ಗೆಜ್ಜೆ ಕಟ್ಟಿ ಕುಣಿದರು ಕಾರಂತರು ನವಿಲಿನಂತೆ
೨. ಪತ್ರೊಡೆ
ಆಟಿಯಲ್ಲಿ ಮಾಡಿ ತಿನ್ನಿರುಚಿಯಾದ ಪತ್ರೊಡೆ
ಇದನ್ನಿಷ್ಟ ಪಟ್ಟು ತಿ೦ದರೆ ಹೊಟ್ಟೆಯಲಿರದು ಎಡೆ
ಇದರಲ್ಲಿ ಅಡಕವಾದ ಚೊಗಚಿ, ಕೆಸುವು
ದೇಹದ ವಿಷವ ತೆಗೆದು ಕೊಡುವುದು ಕಸುವು
೩. ಎಚ್ಚರ
ಬದುಕು ಕಟ್ಟಲು ಕಷ್ಟ
ಸುಖ ದುಃಖ ಬಂದು-
ಹೋಗುವುದು ದಿಟ
ಬದುಕು ನಶ್ವರ
ಇರಲಿ ನಿಚ್ಚ, ಎಚ್ಚರ
೪. ವರ್ಷ-ಹರ್ಷ
ಆಟಿ ತಿಂಗಳಲ್ಲಿ ಬಾರದೇ ಇದ್ದ ವರ್ಷ
ಸೋಣೆಯಲ್ಲಿ ಭರದಿಂದ ಬರುವುದು ಹರ್ಷ
ಒಂದೊಂದೇ ಇನಿ ಹನಿ ಮಣ್ಣಲ್ಲಿ ಇಂಗಲಿ
ಬುವಿಯಾಳಕಿಳಿದು ಅಂತರ್ಜಲ ತುಂಬಲಿ
೫. ಆಟಿಕಳೆಂಜ
ಆಟಿಯಲ್ಲಿ ಬರುವನು ಮನೆಗೆ ಆಟಿಕಳೆಂಜ
ಪನೆಕೊಡೆ ಹಿಡಿದು ತೆಂಬರೆಯ ಬಡಿತಕ್ಕೆ
ಹೆಜ್ಜೆಹಾಕಿ ಕುಣಿದು ರೋಗಗಳ ಕಳೆವ, ನಿಜ
ಇಂಥದು ಕಾಣೆಯಾಗಿ ಸೇರದಿದ್ರೆ ಸಾಕಿತಿಹಾಸಕ್ಕೆ!
-ಗುಣಾಜೆ ರಾಮಚಂದ್ರ ಭಟ್
ಗುಣಾಜೆ ಚಂದ್ರಮ - ೪ ನ್ನು ಓದಲು ಮುಂದಿನ ಲಿಂಕ್ ಗೆ ಭೇಟಿ ನೀಡಿ -
ಚಂದ್ರಮ ೪
About the Author
ಹೆಸರು : ಶ್ರೀ ಗುಣಾಜೆ ರಾಮಚಂದ್ರ ಭಟ್.
▪ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ಸಾಹಿತ್ಯದೊಂದಿಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
ಅದಲ್ಲದೆ ಚುಟುಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿರುವ ಇವರು 2014 ರಲ್ಲಿ "ಎದೆಯ ದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದರ 300 ಪ್ರತಿಗಳನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಆಯ್ಕೆ ಮಾಡಿಕೊಂಡುದು ಇವರ ಹಿರಿಮೆಗೊಂದು ಗರಿ. ಅತ್ಯುತ್ತಮ ಶಿಕ್ಷಕರಾಗಿದ್ದ ಇವರು 2014ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ಮಟ್ಟದ "ಅತ್ಯುತ್ತಮ ಜಿಲ್ಲಾ ಶಿಕ್ಷಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಕವಿಗೊಷ್ಟಿಗಳಲ್ಲಿ ಭಾಗವಹಿಸಿರುವ ರಾಮಚಂದ್ರ ಭಟ್ಟರು ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ತಮ್ಮದೇ ಶೈಲಿಯ ಸಾಹಿತ್ಯ ಸಿಂಚನವನ್ನು ಪಸರಿಸುತ್ತಿದ್ದಾರೆ.
ಇದೀಗ ನಮ್ಮ ಈ ಜಾಲದಲ್ಲಿ "ಗುಣಾಜೆ ಚಂದ್ರಮ" ಎಂಬ ಹೆಸರಿನಲ್ಲಿ ಅವರ ಚುಟುಕಗಳನ್ನು ನೀವು ಓದಬಹುದು...
ವಿಳಾಸ:
ಕವನ ಸದನ
ದೇರಳಕಟ್ಟೆ ಅಂಚೆ
ಬೆಲ್ಮ ಗ್ರಾಮ
ಮಂಗಳೂರು ತಾಲೂಕು
ದ.ಕ 575018
ದೂರವಾಣಿ : +919743902522
No comments:
Post a Comment
ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.