ಭಾವಗೀತೆ ೭ - ಪ್ರೀತಿಧಾರೆ
ಪ್ರೀತಿಧಾರೆಯೆರೆದ ಹೂವೆ
ಮಧುರವಾಗಿ ನೆನೆಯುವೆ
ಮನದಿ ಬರೆದ ಗೀತೆಯನ್ನು
ರಾಗವಾಗಿ ಹಾಡುವೆ ||ಪ||
ಭಾವತುಂಬಿ ಮನದ ಹಕ್ಕಿ
ರೆಕ್ಕೆ ಬಿಚ್ಚಿ ನಲಿಯಿತು
ನಿನ್ನ ನಗುವ ನೋಡುತಲೇ
ಮೇಲೆ ಮೇಲೆ ಹಾರಿತು ||೧||
ಕಡಲ ತೆರೆಗೆ ಮೈಯನೊಡ್ಡಿ
ನಿನ್ನ ಒಲವನರಸಿದೆ
ಮನದಿ ಬರೆದ ಗೀತೆಯನ್ನು
ಏಕೆ ಹೀಗೆ ಒರೆಸಿದೆ ||೨||
ಉರುಳಿ ಹೋಗುತಿರುವ ಕಾಲ
ಹಿಡದು ನಾನು ಕುಳಿತಿಹೆ
ನನ್ನ ಹೃದಯವನ್ನು ಒಡೆದು
ಎತ್ತ ಕಡೆಗೆ ಸಾಗಿಹೆ ||೩||
ಏರಿ ಹೋದ ಪ್ರೀತಿ ಹಕ್ಕಿ
ರೆಕ್ಕೆ ಮುಚ್ಚಿ ಕುಸಿಯಿತು
ಮೌನವಾಗಿ ಮೈಯ ಮುದುಡಿ
ಬೇನೆಯನ್ನು ಸಹಿಸಿತು ||೪||
ಬಣ್ಣಬಣ್ಣದಾಟಗಳಿಗೆ
ಮನವು ಸೋತು ಹೋಯಿತು
ಕಣ್ಣ ತೆರೆದು ನೋಡುವಾಗ
ಎಲ್ಲಾ ಮಾಯವಾಯಿತು ||೫||
-ಶ್ರೀಸುತ
■ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
Photo Credit: wallpapersjpg.com
ಭಾವಗೀತೆ ೬ - "ಜೀವವೀಣೆ"ಯನ್ನು ಓದಲು ಭಾವಗೀತೆ ೬ ಕ್ಲಿಕ್ ಮಾಡಿ.
Avatha👌
ReplyDeleteThank you so much Bharath...
Delete